Uyghur ವಲಯದಲ್ಲಿ ಬಲವಂತದ ದುಡಿಮೆಯನ್ನು ಕೊನೆಗೊಳಿಸುವುದು

Uyghur ಹಾಗೂ ಇತರ ಟರ್ಕಿ ಮತ್ತು ಮುಸ್ಲಿಂ ಪ್ರಜೆಗಳನ್ನು ಚೀನಾ ಸರ್ಕಾರವು ಶೋಷಣೆಗೊಳಪಡಿಸುತ್ತಿದ್ದುದು ಮಾನವೀಯತೆಯ ಮೇಲೆ ನಡೆಸಿದ ಅಪರಾಧವಾಗಿದೆ. ಇದು ಪ್ರಮುಖ ಅಪಾರೆಲ್ ಬ್ರಾಂಡ್ ಹಾಗೂ ರೀಟೈಲರ್‍ಗಳನ್ನು ಗಂಭೀರವಾದ ಮಾನವ ಹಕ್ಕುಗಳ ಬಿಕ್ಕಟ್ಟಿಗೆ ದೂಡಿದೆ.  Xinjiang Uyghur ಸ್ವಾಯತ್ತ ವಲಯ (Uyghur ವಲಯ) ದಲ್ಲಿ ಸರ್ಕಾರವೇ ವ್ಯಾಪಕವಾಗಿ ಬಲವಂತದ ದುಡಿಮೆಯನ್ನು ಉತ್ತೇಜಿಸುತ್ತಿರುವುದಲ್ಲದೆ ಮನಸೋ ಇಚ್ಛೆ ಕೆಲಸದಿಂದ ತೆಗೆದುಹಾಕುವುದು, ರಾಜಕೀಯ ಧೋರಣೆಯನ್ನು ಕಡ್ಡಾಯವಾಗಿ ಹೇರುವುದು, ಬಲವಂತದಿಂದ ಕುಟುಂಬವನ್ನು ಒಡೆಯುವುದು ಮತ್ತು ವ್ಯಾಪಕ ಕಣ್ಗಾವಲುಗಳಂತಹ ಮಾನವ ಹಕ್ಕುಗಳ ಶೋಷಣೆಗೂ ಕಾರಣವಾಗಿತ್ತು.

ಚೀನಾ ಸರ್ಕಾರದ ಬಲವಂತದ ದುಡಿಮೆಯ ಕ್ರಮಕ್ಕೆ ಗಾರ್ಮೆಂಟ್ ವಲಯವು ಪ್ರಮುಖ ಕೇಂದ್ರಬಿಂದುವಾಗಿದೆ. ಜಾಗತಿಕ ಅಪಾರೆಲ್ ಉದ್ಯಮದ ಸಪ್ಲೈ ಚೈನ್‍ನಲ್ಲಿ ಕೇವಲ ಹೊಲಿಗೆಯ ಹಂತದಲ್ಲಿ ಮಾತ್ರವಲ್ಲದೆ ಸಪ್ಲೈಚೈನ್‍ನ ಪ್ರಾಥಮಿಕ ಹಂತವಾದ ಹತ್ತಿ ಉತ್ಪಾದನೆಯಲ್ಲಿ ಈ ಬಲವಂತದ ದುಡಿಮೆಯ ಅಪಾಯವು ಹೆಚ್ಚಿದೆ. ತಲ್ಲಣಗೊಳಿಸುವ ಅಂಕಿ ಅಂಶವೆಂದರೆ; ಜಾಗತಿಕ ಮಟ್ಟದ ಒಟ್ಟೂ ಹತ್ತಿ ಪೂರೈಕೆಯಲ್ಲಿ Uyghur ವಲಯವು ಶೇ.20 ರಷ್ಟನ್ನು ಪೂರೈಸುತ್ತದೆ.

ಜಾಗತಿಕ ಗಾರ್ಮೆಂಟ್ಸ್ ಮಾರುಕಟ್ಟೆಯಲ್ಲಿ ಪ್ರತೀ ಐದು ಹತ್ತಿ ಉಡುಪಿನ ಪೈಕಿ ಒಂದು ಉಡುಪು Uyghur ವಲಯದ ಹತ್ತಿಯನ್ನು ಹೊಂದಿದ್ದು ಇದು ಬಲವಂತದ ದುಡಿಮೆಯಿಂದ ತಯಾರಿಸಿದ್ದು ಎಂಬ ಅಪಾಯ ಎದುರಿಸುವ ಸಾಧ್ಯತೆ ಹೆಚ್ಚಿದೆ.  

Uyghur ವಲಯದಲ್ಲಿ ಸರ್ಕಾರೀ ಪ್ರಾಯೋಜಿತ ಬಲವಂತದ ದುಡಿಮೆಯ ಬಿಕ್ಕಟ್ಟಿಗೆ ಅಪಾರೆಲ್ ಬ್ರಾಂಡ್ ಮತ್ತು ರೀಟೈಲರ್‍ಗಳು 4 ವಿಧಾನದ ಮೂಲಕ ತಮ್ಮ ಕೊಡುಗೆಯನ್ನೂ ನೀಡುತ್ತಿದ್ದಾರೆ.

  1. Uyghur ವಲಯದಲ್ಲಿ ಉಡುಪು ಅಥವಾ ಇತರ ಹತ್ತಿಯಾಧಾರಿತ ವಸ್ತುಗಳನ್ನು ಉತ್ಪಾದಿಸುವ ಕಾರ್ಖಾನೆಗಳೊಂದಿಗೆ ವಾಣಿಜ್ಯ ಸಂಬಂಧ ಹೊಂದುವÀ ಮೂಲಕ;
  2. ಕೆಲವು ಕಂಪನಿಗಳು Uyghur ವಲಯದ ಹೊರಗಿದ್ದರೂ, Uyghur ವಲಯದಲ್ಲಿರುವ ಕಾರ್ಖಾನೆಗಳಿಗೆ ತಮ್ಮ ಉತ್ಪಾದನೆಯನ್ನು ಗುತ್ತಿಗೆಗೆ ನೀಡುತ್ತಿವೆ ಮತ್ತು ಮತ್ತು ಚೀನಾ ಸರ್ಕಾರವು ನೀಡುವ ಸಬ್ಸಿಡಿಗಳನ್ನು ಪಡೆದು ಅಥವಾ ಸರ್ಕಾರವೇ ಒದಗಿಸುವ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿವೆ. ಇಂತಹ ಕಂಪನಿಗಳೊಂದಿಗೆ ವಾಣಿಜ್ಯ ವ್ಯವಹಾರವನ್ನು ಹೊಂದುವ ಮೂಲಕ;
  3. Uyghur ವಲಯದ ಹೊರಗಿದ್ದರೂ, ಸರ್ಕಾರವು ಕಳಿಸಿದ Uyghur ವಲಯದ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡ ಕಂಪನಿಗಳೊಂದಿಗೆ ವಾಣಿಜ್ಯ ವ್ಯವಹಾರವನ್ನು ಹೊಂದುವ ಮೂಲಕ;
  4. ಚೀನಾದಲ್ಲಿರುವ ಸಪ್ಲೈಯರ್‍ಗಳೊಂದಿಗೆ ವ್ಯವಹಾರ ಮಾಡುವ ಮೂಲಕ ಮತ್ತು ಜಾಗತಿಕವಾಗಿ ಬಟ್ಟೆ, ನೂಲು ಅಥವಾ ಹತ್ತಿಯಷ್ಟೇ ಅಲ್ಲದೆ ವಲಯದಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಜಾಗತಿಕವಾಗಿ ಮಾರಾಟ ಮಾಡುವ ಮೂಲಕ;

ಸಾಮಾನ್ಯವಾಗಿ ತಮ್ಮ ಸಪ್ಲೈಚೈನ್‍ನಲ್ಲಿ ಬಲವಂತದ ದುಡಿಮೆ ಇಲ್ಲ ಎಂಬುದನ್ನು ಕಾರ್ಮಿಕ ಆಡಿಟ್‍ಗಳ ಮೂಲಕ ಬ್ರಾಂಡ್‍ಗಳು ಖಾತ್ರಿಪಡಿಸಿಕೊಳ್ಳುತ್ತವೆ. ಆದರೆ Uyghur ವಲಯದಲ್ಲಿರುವ ತೀವ್ರ ದಮನಕಾರೀ ಮತ್ತು ನಿರಂತರ ಕಣ್ಗಾವಲಿನ ಕ್ರಮಗಳಿಂದ ಬ್ರಾಂಡ್‍ಗಳಿಗೆ ಇದು ಅಸಾಧ್ಯವಾಗಿದೆ. ಏಕೆಂದರೆ ಅಲ್ಲಿ ಒಬ್ಬ ಸ್ವತಂತ್ರ ತನಿಖಾಧಿಕಾರಿಯೊಂದಿಗೆ ಯಾವ ಕಾರ್ಮಿಕರೂ ಭೀತಿಯಿಲ್ಲದೆ ಮಾತನಾಡಲು ಸಾಧ್ಯವೇ ಇಲ್ಲ. ಆದ್ದರಿಂದ Uyghur ವಲಯದ ಬಲವಂತದ ದುಡಿಮೆಯ ಭಾಗವಾಗುವುದನ್ನು ತಪ್ಪಿಸಿಕೊಳ್ಳಲು ಬ್ರಾಂಡ್‍ಗಳು ತಮ್ಮ ಸಪ್ಲೈಚೈನ್‍ನ ಎಲ್ಲ ಹಂತದ ಕೆಲಸಗಳನ್ನೂ, ಅಂದರೆ ಹತ್ತಿಯಿಂದ, ಉತ್ಪಾದನಾ ವಸ್ತುಗಳವರೆಗೂ  Uyghur ವಲಯದಿಂದ ಹಿಂತೆಗೆದುಕೊಳ್ಳಬೇಕು ಮತ್ತು ಈ ಬಲವಂತದ ದುಡಿಮೆಯಲ್ಲಿ ಸಿಲುಕಿರುವ ಕಂಪನಿಗಳೊಂದಿಗೆ ತಮ್ಮ ವಾಣಿಜ್ಯ ಸಂಬಂಧಗಳನ್ನು ಕೊನೆಗೊಳಿಸಬೇಕು.