ನೀತಿ ಸಂಹಿತೆ

WRC ಕೋಡ್ ಆಫ್ ಕಾಂಡಕ್ಟ್‍ನಲ್ಲಿರುವ ಕಾರ್ಮಿಕರ ಹಕ್ಕುಗಳ ಮುಖ್ಯ ಅಂಶಗಳನ್ನು ಈ ಕೆಳಗೆ ನೀಡಲಾಗಿದೆ. WRC ಯ ಸಂಬಂಧಿತ ಬಹುತೇಕ ವಿಶ್ವವಿದ್ಯಾಲಯಗಳ ಕೋಡ್‍ಆಫ್‍ಕಾಂಡಕ್ಟ್‍ನಲ್ಲಿ ಈ ಮಟ್ಟಗಲುಇರುತ್ತವೆ. ಕಾರ್ಖಾನೆಗಳಲ್ಲಿ ತನಿಖೆ ನಡೆಸಲು WRC ಈ ಮಟ್ಟಗಳನ್ನು ಉಪಯೋಗಿಸುತ್ತದೆ.

  1. ವೇತನ ಮತ್ತು ಸೌಲಭ್ಯಗಳು:ಕಾರ್ಮಿಕರು ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ವೇತನ ಬಹುಮುಖ್ಯಎಂಬುವುದನ್ನು ಮಾಲೀಕರು ಪರಿಗಣಿಸಬೇಕು. ಮಾಲೀಕರುಕಾರ್ಮಿಕರಿಗೆ ಕನಿಷ್ಠ ಪಕ್ಷಎಲ್ಲಾ ಕಾನೂನು ಮತ್ತು ನಿಬಂಧನೆ ಪ್ರಕಾರ ಸಿಗಬೇಕಾದ ಮತ್ತುಅವರ ಮೂಲಭೂತ ಅಗತ್ಯಗಳನ್ನು ಪೂರೈಸುವಂತಹ ವೇತನ ಮತ್ತು ಸೌಲಭ್ಯಗಳನ್ನು ಕೊಡಬೇಕು, ಹಾಗು ಕಾರ್ಮಿಕರು ಮತ್ತುಅವರಕುಟುಂಬದ ಸದಸ್ಯರುಗೌರವಯುತಜೀವನವನ್ನು ನಡೆಸಲು ಬೇಕಾದ ವೇತನವನ್ನು ನಿಗದಿ ಪಡಿಸಬೇಕು.
  2. ಕೆಲಸದ ಗಂಟೆಗಳು:ಗಂಟೆಅಥವ ಪೀಸಿನ ಆಧಾರದ ಮೇಲೆ ಕೆಲಸ ಮಾಡುವಕಾರ್ಮಿಕರಿಗೆ (1) ಇವೆರಡರಲ್ಲಿಯಾವುದುಕಡಿಮೆಯೋಅದಕ್ಕಿಂತ ಹೆಚ್ಚು ಕೆಲಸ ಮಾಡುವಅಗತ್ಯವಿರಬಾರದು (ಅ) ವಾರದಲ್ಲಿ 48 ಗಂಟೆಗಳ ಕಾಲ, ಅಥವ (ಆ) ಉತ್ಪಾದನೆ ಮಾಡುವದೇಶದ ಕಾನೂನಿನ ಪ್ರಕಾರ ಎಷ್ಟು ಸಮಯ ಕೆಲಸ ಮಾಡಬವುದು ಅಷ್ಟು, ಹಾಗು (2)ಪ್ರತಿ ಏಳು ದಿನಗಳಲ್ಲಿ ಒಂದುದಿನದರಜೆ ಮತ್ತುಇತರ ರಜೆಗಳು ಸಿಗಬೇಕು.
  3. ಓವರ್ ಟೈಮ್ ಭತ್ಯೆ: ಕಾರ್ಮಿಕರ ಸ್ವಯಂಒಪ್ಪಿಗೆಯಿಂದ ಮಾತ್ರ ಎಲ್ಲಾ ಓವರ್‍ಟೈಮ್ ಕೆಲಸ ಆಗಬೇಕು. ಗಂಟೆ ಅಥವ ಪೀಸಿನ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರು, ಅವರ ನಿಗದಿತ ಕೆಲಸದ ಗಂಟೆಗಳಲ್ಲದೆ ಮಾಡುವ ಹೆಚ್ಚುವರಿ ಕೆಲಸಕ್ಕೆ, ಉತ್ಪಾದನೆ ಮಾಡುವ ದೇಶದ ಕಾನೂನಿನ ಪ್ರಕಾರ ಹೆಚ್ಚುವರಿ ಓವರ್‍ಟೈಮ್ ಭತ್ಯೆಕೊಡಬೇಕು, ಅಥವಅಂತಹ ಕಾನೂನಿ ಇಲ್ಲದ ದೇಶಗಳಲ್ಲಿ ನಿಗದಿತಗಂಟೆಯ ವೇತನದಒಂದುವರೆಯಷ್ಟು (1 1/2) ಕೊಡಬೇಕು.
  4. ಬಾಲ ಕಾರ್ಮಿಕ ಪದ್ಧತಿ: ಮಾಲೀಕರು 15 ವರ್ಷದ (ಅಥವ 14 ವರ್ಷದ, ಅಂತರರಾಷ್ಟ್ರೀಯಕಾರ್ಮಿಕ ಸಂಸ್ಥೆಯ ಅಭಿವೃದ್ಧಿಶೀಲ ದೇಶಗಳಿಗೆ ಅನ್ವಯಿಸುವರೂಢಿಯನ್ನು ಅನುಸರಿಸಿ ಉತ್ಪಾದನೆ ಮಾಡುವದೇಶದ ಕಾನೂನು ಗೋಚರಿಸಿದ್ದಲ್ಲಿ) ಕೆಳಗಿನ ವ್ಯಕ್ತಿಯನ್ನು ಕೆಲಸಕ್ಕೆ ಇಟ್ಟು ಕೊಳ್ಳಬಾರದು. ಕಡ್ಡಾಯ ಶಿಕ್ಷಣವನ್ನು ಮುಗಿಸುವ ವಯಸ್ಸು, ಮೇಲೆ ಕೊಟ್ಟಿರುವಉದ್ಯೋಗ ಮಾಡಲು ಬೇಕಾದ ಕನಿಷ್ಠ ವಯಸ್ಸಿಗಿಂತ ಹೆಚ್ಚಿದ್ದಲ್ಲಿ, ಯಾವ ವಯಸ್ಸು ಹೆಚ್ಚೋ, ಅದು ಈ ಭಾಗಕ್ಕೆಅನ್ವಯಿಸತ್ತದೆ. ಕೋಡನ್ನು ಪರಿಪಾಸುವಾಗಉದ್ಯೋಗದಿಂದ ಬಿಡುಗಡೆಯಾದ ಮಕ್ಕಳ ಮೇಲೆ ಆಗುವ ನಕರಾತ್ಮಕ ಪರಿಣಾಮವನ್ನುಕಡಿಮೆ ಮಾಡಲು ಮಾಲೀಕರು ಸರ್ಕಾರ, ಸಾಮಾಜಿಕ ಸಂಘಟನೆ, ಮಾನವ ಹಕ್ಕಿನ ಸಂಸ್ಥೆಗಳೊಂದಿಗೆ ಚರ್ಚಿಸಲು ಮತ್ತು ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಲು ಒಪ್ಪಿರುತ್ತಾರೆ.
  5. ಜೀತ ಪದ್ಧತಿ: ಬಲವಂತದಕಾರಾಗೃಹದುಡಿಮೆ, ಜೀತದದುಡಿಮೆ, ಬಂಧನದದುಡಿಮೆಯಾವುದೇರೀತಿಯಾದ ಬಲವಂತದದುಡಿಮೆಯನ್ನುಉಪಯೋಗಿಸ ಬಾರದು.
  6. ಆರೋಗ್ಯ ಮತ್ತು ಸುರಕ್ಷತೆ: ಮಾಲೀಕರು, ಕೆಲಸದಿಂದಅಥವ ಕೆಲಸಕ್ಕೆ ಸಂಬಂಧಿತ, ಅಥವ ಕೆಲಸದ ಪ್ರಕ್ರಿಯೆಯಲ್ಲಿಅಥವ ಮಾಲೀಕ ವ್ಯವಸ್ಥೆಗಳ ಬಳಕೆಯಿಂದ ಉಂಟಾಗಬಹುದಾದಅಪಘಾತ ಮತ್ತುಅರೋಗ್ಯಕ್ಕಾಗುವ ಹಾನಿಯನ್ನುತಡೆಯಲು, ಸುರಕ್ಷಿತ ಮತ್ತುಆರೋಗ್ಯಕರ ವಾತಾವರಣವನ್ನು ಒದಗಿಸಿಕೊಡಬೇಕು.
  7. ಭೇಧ ಭಾವ ಮಾಡಬಾರದು:ಯಾವ ವ್ಯಕ್ತಿಯನ್ನುಕೂಡಉದ್ಯೋಗದಲ್ಲಿಅಂದರೆ ಕೆಲಸಕ್ಕೆ ತೆಗೆದು ಕೊಳ್ಳುವಾಗ, ವೇತನದಲ್ಲಿ, ಸೌಲಭ್ಯಗಳಲ್ಲಿ, ಮುಂದುವರಿಕೆಯಲ್ಲಿ, ಶಿಸ್ತಿನ ವಿಷಯದಲ್ಲಿ, ಕೆಲಸದಿಂದತೆಗೆದು ಹಾಕವುದರಲ್ಲಿ, ನಿವೃತ್ತಿಯಲ್ಲಾಗಲಿ ಲಿಂಗ, ಜಾತಿ, ಧರ್ಮ, ವಯಸ್ಸು, ಅಂಗವಿಕಲತೆ, ಲೈಂಗಿಕತೆ, ರಾಷ್ಟ್ರೀಯತೆ, ರಾಜಕೀಯಅಭಿಪ್ರಾಯ, ಅಥವ ಸಾಮಾಜಿಕ ಗುಂಪು, ಅಥವಜನಾಂಗದಆಧಾರ ಮೇಲೆ ಭೇಧಭಾವಕ್ಕೆ ಒಳಗಾಗಿಸಬಾರದು.
  8. ತೊಂದರೆಅಥವ ಕಿರುಕುಳ:ಎಲ್ಲಾಕಾರ್ಮಿಕರೊಂದಿಗೆಘನತೆಗೌರವದಿಂದ ವರ್ತಿಸಬೇಕು. ಯಾವಕಾರ್ಮಿಕರನ್ನೂದೈಹಿಕ, ಲೈಂಗಿಕ, ಮಾನಸಿಕ ತೊಂದರೆಅಥವ ಕಿರುಕುಳಕ್ಕೆ ಅಥವ ಬೈಗುಳಕ್ಕೆ ಒಳಗಾಗಿಸಬಾರದು. ಮಾಲೀಕರುಯಾವುದೇರೀತಿಯಾದದೈಹಿಕ ಶಿಕ್ಷೆಯನ್ನು ಪ್ರಯೋಗಿಸಬಾರದುಅಥವ ಸಹಿಸಬಾರದು.
  9. ಸಂಘಟನಾ ಸ್ವಾತಂತ್ರ್ಯ ಮತ್ತು ಸಾಮೂಹಿಕ ಚೌಕಾಸಿ:ಕಾರ್ಮಿಕರ ಸಂಘಟನಾ ಸ್ವಾತಂತ್ರ್ಯಾಮತ್ತು ಸಾಮೂಹಿಕ ಚೌಕಾಸಿಯ ಹಕ್ಕನ್ನು ಮಾಲೀಕರು ಪರಿಗಣಿಸಬೇಕು ಮತ್ತುಗೌರವಿಸಬೇಕು. ಕಾರ್ಮಿಕರು ಸ್ವತಂತ್ರವಾಗಿ ಸಂಘಟಿಸಲುಅಥವ ಸಾಮೂಹಿಕ ಚಾಕಾಸಿಗಾಗಿ ಮಾಡುವ ಪ್ರಯತ್ನಗಳಿಗಾಗಿ ಅವರನ್ನುತೊಂದರೆಗೆ, ಬೆದರಿಕೆಗೆಅಥವ ಪ್ರತಿಕಾರಕ್ಕೆ ಒಳಗಾಗಿಸಬಾರದು. ಕಾರ್ಮಿಕರಆಯ್ಕೆಯ ಸಂಘಟನೆಯನ್ನು ಸಂಘಟಿಸುವಾಗಅದನ್ನು ಪ್ರತಿಬಂದಿಸಲು ರಾಜ್ಯದಅಧಿಕಾರವನ್ನುಉಪಯೋಗಿಸುವ ಸರ್ಕಾರಿ ಮತ್ತುಇತರ ಸಂಸ್ಥೆಗಳೊಂದಿಗೆ ಮಾಲೀಕರು ಸಹಕರಿಸಬಾರದು. ಸಂಘಟನೆಯಕಾರ್ಯಕರ್ತರಿಗೆಕಾರ್ಮಿಕರನ್ನು ಬೇಟಿಯಾಗಲು ಸುಂಕವಿಲ್ಲದ ಪ್ರವೇಶಾಧಿಕಾರವನ್ನು ಮಾಲೀಕರುಕೊಡಬೇಕು. ಕಾರ್ಮಿಕರಆಯ್ಕೆಯ ಸಂಘಟನೆಯನ್ನು ಮಾಲೀಕರು ಪರಿಗಣಿಸಬೇಕು.
  10. ಮಹಿಳೆಯರ ಹಕ್ಕುಗಳು:
    ಅ. ಮಹಿಳಾ ಕಾರ್ಮಿಕರಿಗೆ ಸಮಾನವಾದ ಸೌಲಭ್ಯಗಳು ಸೇರಿಸಿ ವೇತನ; ಸಮಾನವಾದ ವರ್ತನೆ; ಕೆಲಸದಲ್ಲಿ ಸಮಾನವಾದಅರ್ಹತೆಯ ನಿರ್ಣಯ; ಮತ್ತು ಪುರುಷಕಾರ್ಮಿಕರಿಗೆದೊರಕುವ ಪ್ರತಿಯೊಂದು ಸ್ಥಾನಗಳನ್ನು ಕೆಲಸ ಮಾಡಲು ಸಾಮಾನವಾದ ಅವಕಾಶ ಸಿಗಬೇಕು.
    ಆ. ಗರ್ಭ ಪರೀಕ್ಷೆಯುಉದ್ಯೋಗದ ಷರತ್ತಾಗಬಾರದು, ಅಥವಗರ್ಭ ಪರೀಕ್ಷೆಯನ್ನು ಮಾಡಿಸಿಕೊಳ್ಳಿಯೆಂದು ಕಾರ್ಮಿಕರಿಗೆ ಹೇಳಬಾರದು.
    ಇ. ಹೆರಿಗೆರಜೆ ತೆಗೆದುಕೊಳ್ಳುವ ಕಾರ್ಮಿಕರನ್ನು ಕೆಲಸದಿಂದತೆಗೆದು ಹಾಕುವುದಾಗಲೀಅಥವತೆಗೆದು ಹಾಕುವೆವೆಂದು ಹೆದರಿಸುವುದಾಗಲಿ ಮಾಡಬಾರದು.ಮತ್ತುಅವರ ಸೇವಾಹಿರಿತನವನ್ನುಅಥವ ವೇತನವನ್ನುಕಡಿಮೆ ಮಾಡುವಂತಿಲ್ಲ ಹಾಗೂ ಹೆರಿಗೆರಜೆಯಿಂದ ವಾಪಾಸಾದಾಗಅವರ ಹಿಂದಿನ ವೇತನ ಮತ್ತು ಸೌಲಭ್ಯಗಳೊಂದಿಗೆ ಅವರಿಗೆ ಕೆಲಸ ಕೊಡಬೇಕು.
    ಈ. ಕಾರ್ಮಿಕರನ್ನುಗರ್ಭ ನಿರೋಧಕಗÀಳನ್ನು ಉಪಯೋಗಿಸಲು ಬಲವಂತ ಮಾಡಬಾರದು.
    ಉ. ಕಾರ್ಮಿಕರ ಸುರಕ್ಷತೆಅಥವಗರ್ಭಿಣಿಆರೋಗ್ಯಕ್ಕೆಅಪಾಯವಾಗಬಹುದಾದಅಂಟುಅಥವ ದ್ರಾವಣಗಳಂತಹ ಹಾನಿಕಾರಕ ಪಧಾರ್ಥಗಳನ್ನು ಅವರಿಂದದೂರವಿಡಬೇಕು.
    ಊ. ಮಾಲೀಕರು, ಮಹಿಳಾ ಕಾರ್ಮಿಕರಿ ಗರ್ಭಧರಿಸಿದ ಸಮಯದಲ್ಲಿಯೋಗ್ಯವಾದ ಸೌಕರ್ಯ ಮತ್ತು ಸ್ಥಳವನ್ನು ಒದಗಿಸಿಕೊಡಬೇಕು.