ಫ್ಯಾಕ್ಟರಿ ಡೇಟಾಬೇಸ್

ಗಾರ್ಮೆಂಟ್ ಉದ್ಯಮದ ಪಾರದರ್ಶಕತೆಯನ್ನು ಹೆಚ್ಚಿಸಲು Wಖಅ ಮಾಡುತ್ತಿರುವ ಪ್ರಯತ್ನಗಳ ಭಾಗವಾಗಿ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಹೆಸರು ಮತ್ತು ಚಿನ್ಹೆ ಹೊತ್ತಿರುವ ವಸ್ತುಗಳನ್ನು ತಯಾರಿಸುವ ವಿಶ್ವದಲ್ಲಿರುವ ಕಾರ್ಖಾನೆಗಳ ಬಗ್ಗೆ ಮಾಹಿತಿಯನ್ನು ನಮ್ಮ ವೆಬ್‍ಸೈಟಿನಲ್ಲಿ ಪ್ರಕಟಿಸುತ್ತೇವೆ. ಇದರಲ್ಲಿ ಕಾರ್ಖಾನೆಗಳ ಹೆಸರು ಮತ್ತು ವಿಳಾಸ, ತಯಾರಾಗುವ ವಸ್ತುಗಳು ಮತ್ತು ಇತರ ವಿಷಯಇರುತ್ತದೆ. ಈ ಮಾಹಿತಿಯನ್ನು ಓದಲು ಇಲ್ಲಿ ನೋಡಿ.
ಈ ಮಾಹಿತಿಯನ್ನುಓದಲು, ಆಂಗ್ಲಭಾಷೆಯ ಸ್ವಲ್ಪಅರಿವು ಬೇಕಾಗುತ್ತದೆ.

  • ಯಾವುದೊಂದು ದೇಶದಲ್ಲಿರುವ ಕಾರ್ಖಾನೆಗಳನ್ನು ಹುಡುಕಲು, COUNTRY ಎಂಬ ಪಟ್ಟಿಯಲ್ಲಿ ಆ ದೇಶವನ್ನುಆಯ್ಕೆ ಮಾಡಿ.
  • ಯಾವುದೊಂದು ಬ್ರಾಂಡ್‍ಗಾಗಿ ತಯಾರಿಸುವ ಕಾರ್ಖಾನೆಗಳನ್ನು ಹುಡುಕಲು, LICENSEE ಎಂಬ ಪಟ್ಟಿಯಲ್ಲಿ ಆ ಬ್ರಾಂಡನ್ನುಆಯ್ಕೆ ಮಾಡಿ.
  • ಯಾವುದೊಂದು ವಿಶ್ವವಿದ್ಯಾಲಯಕ್ಕಾಗಿ ತಯಾರಿಸುವ ಕಾಖಾನೆಗಳನ್ನು ಹುಡುಕಲು, UNIVERSITY ಎಂಬ ಪಟ್ಟಿಯಲ್ಲಿ ಆ ವಿಶ್ವವಿದ್ಯಾಲಯವನ್ನುಆಯ್ಕೆ ಮಾಡಿ.
  • ಯಾವುದೊಂದು ಕಾರ್ಖಾನೆಯನ್ನು ಹುಡುಕಲು, FACTORY ಎಂಬ ಜಾಗದಲ್ಲಿ ಆ ಕಾರ್ಖಾನೆಯ ಹೆಸರನ್ನುಟೈಪ್‍ಮಾಡಿ.
  • ಮೇಲೆ ಕೊಟ್ಟಿರುವುದನ್ನು ಒಂದg ಜೊತೆಗೆ ಇನ್ನೊಂದನ್ನು ಸೇರಿಸಿಯೂ ಹುಡುಕಬಹುದು.

ಹುಡುಕಲು ಆದೇಶವನ್ನು ಕೊಟ್ಟಮೇಲೆ, ಪಲಿತಾಂಶಗಳನ್ನು ಈ ರೀತಿಗಳಲ್ಲಿ ದೃಷ್ಟಿಸಬಹುದು.

  • ಕಾರ್ಖಾನೆಗಳ ಪಟ್ಟಿಗೆ ನೇರವಾಗಿ ಹೊಗಲು, VIEW RESULTS BY FACTORY, ORDERED BY COUNTRY ಯನ್ನುಆಯ್ಕೆ ಮಾಡಿ.
  • ಯಾವುದೊಂದು ಬ್ರಾಂಡ್ ಗಾಗಿ ತಯಾರಿಸುವ ಕಾರ್ಖಾನೆಗಳನ್ನು ಮಾತ್ರದೃಷ್ಟಿಸಲು, VIEW RESULTS BY LICENSEE ಯನ್ನುಆಯ್ಕೆ ಮಾಡಿ.
  • ಯಾವುದೊಂದುವಿಶ್ವವಿದ್ಯಾಲಯಕ್ಕಾಗಿತಯಾರಿಸುವ ಕಾಖಾನೆಗಳನ್ನು ಮಾತ್ರದೃಷ್ಟಿಸಲು, VIEW RESULTS BY UNIVERSITY ಯನ್ನುಆಯ್ಕೆ ಮಾಡಿ.