ನಮ್ಮ ಬಗ್ಗೆ

ಕಾರ್ಮಿಕ ಹಕ್ಕುಗಳ ಒಕ್ಕೂಟ (WORKER RIGHTS CONSORTIUM ಅಥವಾ WRC) ಒಂದು ಸ್ವತಂತ್ರ ಕಾರ್ಮಿಕ ಹಕ್ಕಿನ ಮೇಲ್ವಿಚಾರಣಾ ಸಂಸ್ಥೆ. ವಿಶ್ವದ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ಕಾರ್ಮಿಕರ ಕೆಲಸದ ಸ್ಥಿತಿಗಳ ಬಗ್ಗೆ ತನಿಖೆ ಮಾಡುವಂತಹ ಸಂಸ್ಥೆ. ಅಮೇರಿಕದಲ್ಲಿ ಮಾರಾಟವಾಗುವ ಬಟ್ಟೆ ಹಾಗೂ ಇತರ ವಸ್ತುಗಳನ್ನು ತಯಾರಿಸುವ ಕಾರ್ಮಿಕರ ಹಕ್ಕುಗಳ ರಕ್ಷಣೆ ಮತ್ತು ಕಾರ್ಮಿಕರ ಕೆಲಸದ ಸ್ಥಿತಿಗಳನ್ನು ಉತ್ತಮಗೊಳಿಸುವುದು ನಮ್ಮ ಸಂಸ್ಥೆಯ ಉದ್ದೇಶ. WRC ಸ್ವತಂತ್ರ ತನಿಖೆ ನಡೆಸುತ್ತದೆ; ಅಮೇರಿಕದ ಬ್ರಾಂಡ್‍ಗಳಿಗಾಗಿ ತಯಾರಿಸುವ ಕಾರ್ಖಾನೆಗಳನ್ನು ಕುರಿತು ಬಹಿರಂಗ ವರದಿ ನೀಡುತ್ತದೆ; ಮತ್ತು ಈ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಕೆಲಸದ ಸ್ಥಳಕ್ಕೆ ಸಂಬಂಧ ಪಟ್ಟ ಹಕ್ಕುಗಳನ್ನು ರಕ್ಷಿಸಲು ಮಾಡುವ ಪ್ರಯತ್ನಗಳಲ್ಲಿ ಸಹಾಯ ಮಾಡುತ್ತದೆ. ಈ ಕಾರ್ಯದಲ್ಲಿ 175ಕಿಂತ ಹೆಚ್ಚು ವಿಶ್ವವಿದ್ಯಾಲಯಗಳು WRC ಯ ಮಾಡುವುದು ನಮಗೆ ಹೆಮ್ಮೆಯ ವಿಷಯ ಹಾಗು ವಿಶ್ವವಿದ್ಯಾಲಯಗಳ ಹೆಸರು ಮತ್ತು ಚಿನ್ಹೆಯನ್ನು ಹೊತ್ತಿರುವ ಗಾರ್ಮೆಂಟ್ ಮತ್ತುಇತರ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗಳು ನಮ್ಮ ಕೆಲಸದ ಪ್ರಧಾನ ಆಸಕ್ತಿಯ ಕೇಂದ್ರ.